ಅಕ್ಕ ಪಕ್ಕ ಯುಕೆ ದಾಸ್ ನಿರ್ದೇಶನದ 2013 ರ ಕನ್ನಡ ಹಾಸ್ಯ ಚಲನಚಿತ್ರವಾಗಿದೆ. ಚಿತ್ರವನ್ನು ಲಲಿತಾ ದೀಪ್ ಆರ್ಟ್ಸ್ ನಿರ್ಮಿಸಿದೆ. ಈ ಚಲನಚಿತ್ರವು 1989 ರ ಅಮೇರಿಕನ್ ಚಲನಚಿತ್ರ ಸೀ ನೋ ಇವಿಲ್, ಹಿಯರ್ ನೋ ಇವಿಲ್ ಅನ್ನು ಆಧರಿಸಿದೆ, ಆ ಅಮೇರಿಕನ್ ಚಲನಚಿತ್ರವು ಹಿಂದಿ ಚಲನಚಿತ್ರಗಳಾದ ಹಮ್ ಹೈ ಕಮಾಲ್ ಕೆ ಮತ್ತು ಪ್ಯಾರೆ ಮೋಹನ್, ಮರಾಠಿ ಚಲನಚಿತ್ರ ಏಕಾ ಪೇಕ್ಷಾ ಏಕ್, ತಮಿಳು ಚಲನಚಿತ್ರ ಆಂಡಿಪಟ್ಟಿ ಅರಸಂಪಟ್ಟಿ ಮತ್ತು ಕನ್ನಡ ಚಲನಚಿತ್ರ ಬದುಕು ಜಟಕಾ ಬಂಡಿಗಳಿಗೆ ಸ್ಫೂರ್ತಿಯಾಗಿದೆ. == ಪಾತ್ರವರ್ಗ == ರವಿಶಂಕರ್ ಗೌಡ, ತಬಲಾ ನಾಣಿ, ರಾಧಿಕಾ ಗಾಂಧಿ ಜಯಶೀಲ ಲತಾ ಹೊನ್ನವಳ್ಳಿ ಕೃಷ್ಣ == ವಿಮರ್ಶೆ == ಚಲನಚಿತ್ರವು 12 ಏಪ್ರಿಲ್ 2013 ರಂದು ಬಿಡುಗಡೆಯಾಯಿತು. ಟೈಮ್ಸ್ ಆಫ್ ಇಂಡಿಯಾ ಚಿತ್ರಕ್ಕೆ 5 ರಲ್ಲಿ 2 ನಕ್ಷತ್ರಗಳನ್ನು ನೀಡಿ ಹೀಗೆ ಬರೆದಿದೆ- "ಕಳಪೆ ಚಿತ್ರಕಥೆ ಮತ್ತು ದುರ್ಬಲ ನಿರೂಪಣೆಯೊಂದಿಗೆ, ನಿರ್ದೇಶಕರು ಚಲನಚಿತ್ರದ ಯಾವುದೇ ಭಾಗದಲ್ಲಿ ಪ್ರಭಾವ ಬೀರಲು ವಿಫಲರಾಗಿದ್ದಾರೆ." == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಕ್ಕ ಪಕ್ಕ @ ಐ ಎಮ್ ಡಿ ಬಿ